ಬೆಂಗಳೂರು: ಬೇಸಿಗೆ (Summer) ಆರಂಭದಲ್ಲೇ ಬರದ ಛಾಯೆ ಆವರಿಸುತ್ತಿದೆ. ಬೋರ್ ವೆಲ್ (Borewells) ಅಂಕಿ ಅಂಶಗಳನ್ನ ನೋಡಿದರೆ ಹೇಗಪ್ಪ ಈ ಬಾರಿಯ ಕಥೆ ಅನ್ನೋ ಆತಂಕ ಶುರುವಾಗುತ್ತದೆ. ಈಗಾಗಲೇ ನಗರದ (Bengaluru) ಅರ್ಧಕ್ಕರ್ಧ ಬೋರ್ ವೆಲ್ಗಳು ಬೇಸಿಗೆ ಆರಂಭದಲ್ಲೇ ಬತ್ತಿ ಹೋಗಿವೆ.
ಈ ಬಾರಿ ಮಳೆ ಕೈ ಕೊಟ್ಟಿದ್ರಿಂದ ಬೇಸಿಗೆಗೂ ಮುನ್ನವೇ ನೀರಿಗೆ ಹಾಹಾಕಾರ ಶುರುವಾಗಿದೆ. ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರಿಗೆ ಸುಮಾರು 10 ರಿಂದ 15 ಟಿಎಂಸಿ ನೀರು ಬೇಕು. ಅದ್ರೇ ಬೇಸಿಗೆ ಆರಂಭದ ದಿನಗಳಲ್ಲೇ ಬೋರ್ ವೆಲ್ಗಳು ಬತ್ತಿ ಹೋಗ್ತಿವೆ. ಈಗಾಗಲೇ 800 ಕ್ಕೂ ಹೆಚ್ಚಿನ ಬೋರ್ ವೆಲ್ಗಳು ಬತ್ತಿಹೋಗಿವೆ. ಇನ್ನೊಂದು ತಿಂಗಳಲ್ಲಿ 11 ಸಾವಿರ ಬೋರ್ ವೆಲ್ ಪೈಕಿ ಅರ್ಧಕ್ಕರ್ಧ ಬತ್ತಿ ಹೋಗುವ ಸಾಧ್ಯತೆ ಹೆಚ್ಚಾಗಿದೆ.
ಜಾಹೀರಾತು
ಮದುವೆಗೆ ಮೊದಲೇ ಫಸ್ಟ್ ನೈಟ್, 6 ತಿಂಗಳಿಗೆ ಅಮ್ಮನಾದ ನಟಿ!
ಬೇಸಿಗೆಯಲ್ಲಿ ನೀರಿನ ಬಳಕೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಉಷ್ಣಾಂಶ ಹೆಚ್ಚಾಗುವ ಬಗ್ಗೆ ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಉಷ್ಣಾಂಶ ಹೆಚ್ಚಳ ಅಂತರ್ಜಲ ಮಟ್ಟ ಇನ್ನಷ್ಟು ಕುಸಿಯುವ ಸಾಧ್ಯತೆ ಹೆಚ್ಚಾಗಿದೆ. ಬೋರ್ ವೆಲ್ ನೀರನ್ನ ಆಶ್ರಯಿಸಿದ್ದವರು ವಿಧಿಯಿಲ್ಲದೇ ಕಾವೇರಿ ನೀರನ್ನೇ ಆಶ್ರಯಿಸಬೇಕಾಗುತ್ತೆ.
ಜಲಮಂಡಳಿ ವಲಯ | ಬತ್ತಿ ಹೋದ ಬೋರ್ವೆಲ್ |
---|---|
ಬೆಂ. ಪೂರ್ವ | 83 |
ಬೆಂ. ಪಶ್ಚಿಮ | 450 |
ಬೆಂ. ಉತ್ತರ | 168 |
ಬೆಂ. ದಕ್ಷಿಣ | 124 |
ಬೆಂಗಳೂರಲ್ಲಿ 11,614 ಬೋರ್ ವೆಲ್ಗಳಿದ್ದು, ಇದರಲ್ಲಿ 825 ಬೋರ್ ವೆಲ್ ಈಗಾಗಲೇ ಬತ್ತಿ ಹೋಗಿವೆ. ಮತ್ತಷ್ಟು ಬೋರ್ವೆಲ್ಗಳು ಬಿಸಿಲ ಬೇಗೆಯಲ್ಲಿ ಬತ್ತಿಹೋಗುವ ಭೀತಿ ಜಲಮಂಡಳಿ ಜೊತೆಗೆ ಜನರನ್ನು ಕಂಗಾಲಾಗಿಸಿದೆ.
ಬೆಂಗಳೂರಿಗರಿಗೆ ಸಮ್ಮರ್ ಆರಂಭದಲ್ಲೇ ಜಲಕ್ಷಾಮದ ದರ್ಶನವಾಗುತ್ತಿದೆ. ಈ ಪ್ರಮಾಣ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಲಕ್ಷಣಗಳು ಗೋಚರಿಸಿವೆ. ಸರ್ಕಾರ ಹಾಗು ಜಲಮಂಡಳಿ ಏನು ಮಾಡಲಿದೆ ಕಾದು ನೋಡ್ಬೇಕು. (ವರದಿ: ಶರಣು ಹಂಪಿ, ನ್ಯೂಸ್18, ಬೆಂಗಳೂರು)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ