ಬೆಂಗಳೂರು: ಕುಂಬಳಗೋಡು (Kumbalgodu) ಪರ್ಫ್ಯೂಮ್ ಕಾರ್ಖಾನೆಯಲ್ಲಿ (Perfume factory) ನಡೆದ ಅಗ್ನಿದುರಂತ ಪ್ರಕರಣದಲ್ಲಿ ಸಾವಿನ ಸಂಖ್ಯೆ 5ಕ್ಕೇ ಏರಿಕೆಯಾಗಿದೆ. ಸ್ಫೋಟದಲ್ಲಿ ತೀವ್ರ ಗಾಯಗೊಂಡಿದ್ದ 15 ವರ್ಷದ ರಿಯಾನ್ ಪಾಷಾ ಚಿಕಿತ್ಸೆ ಫಲಕಾರಿಯಾಗದೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ (Victoria Hospital) ಮೃತಪಟ್ಟಿದ್ದಾರೆ. ಘಟನೆ ನಡೆದ ದಿನ ಮೂವರು ಸ್ಥಳದಲ್ಲೇ ಸಜೀವದಹನ ಆಗಿದ್ದರು. ಐವರು ಗಂಭೀರವಾಗಿ ಗಾಯಗೊಂಡಿದ್ದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಾ ಇದ್ದರು. ನಿನ್ನೆ ಚಿಕಿತ್ಸೆ (Treatment) ಫಲಕಾರಿಯಾಗದೇ ಇಬ್ಬರು ಗಾಯಾಳುಗಳು ಸಾವನ್ನಪ್ಪಿದ್ದಾರೆ. ಇನ್ನುಳಿದ ಮೂವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಾಹೀರಾತು
ಉಳಿದ ಇಬ್ಬರಿಗೆ ಚಿಕಿತ್ಸೆ ಮುಂದುವರಿದಿದೆ
ಘಟನೆ ಕುರಿತಂತೆ ಮಾಹಿತಿ ನೀಡಿದ ಮೃತ ಬಾಲಕರ ಮಾವ ಅಪ್ಜಲ್ ಖಾನ್, ನಿನ್ನೆ ಬೆಳಗ್ಗೆ ಸಾದಿಕ್ ಪಾಷ ಮೃತಪಟ್ಟಿದ್ದಾರೆ. ಮಧ್ಯರಾತ್ರಿ ರಿಯಾನ್ ಪಾಷ ಮೃತಪಟ್ಟಿದ್ದರು. ಊಟ ಕೊಡಲು ಹೋಗಿ ಈ ಇಬ್ಬರು ಮೃತಪಟ್ಟಿದ್ದಾರೆ. ಅದೇ ದಿನ ಕೆಲಸಕ್ಕೆ ಹೋಗಿರೋದು, ಅವನು ಲಾರಿ ಡ್ರೈವರ್ ಕೆಲಸ ಮಾಡ್ತಾ ಇದ್ದ. ಇನ್ನೂ ಉಳಿದ ಇಬ್ಬರಿಗೆ ಚಿಕಿತ್ಸೆ ಮುಂದುವರಿದಿದೆ. ಇದುವರೆಗೂ ಐವರು ಸಾವನ್ನಪ್ಪಿದ್ದು, ಉಳಿದ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ:
ACB Raid: ಬರೋಬ್ಬರಿ ₹84 ಸಾವಿರ ಲಂಚ ಸ್ವೀಕರಿಸೋವಾಗ ACB ಬಲೆಗೆ ಬಿದ್ದು ಗಳಗಳನೇ ಕಣ್ಣೀರಿಟ್ಟ ಮಹಿಳಾ ಅಧಿಕಾರಿ
ಕಿಂಗ್ ಕೊಹ್ಲಿ ಮಗನ ಹೆಸರಿನ ಅರ್ಥವೇನು ಗೊತ್ತಾ?
ಭೀಕರ ಅಪಘಾತಕ್ಕೆ 3 ಬಲಿ
ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಮೂವರ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೈಕ್ ಹಾಗೂ ಬಸ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಮಿಟ್ಟಿಮಲಕಾಪುರ ಬಳಿ ಘಟನೆ ನಡೆದಿದೆ. ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಯರಗೇರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಯಚೂರಿನಲ್ಲಿ ಮತ್ತೊಂದು ಪ್ರತ್ಯೇಕ ಅಪಘಾತ ನಡೆದಿದ್ದು, ಬೈಕ್‌ಗೆ ಅಪರಿಚಿತ ವಾಹನ ಗುದ್ದಿದ್ದು,ಬೈಕ್ ಸವಾರ ಸಾವು ಮತ್ತೊಬ್ಬನಿಗೆ ಗಾಯವಾಗಿದೆ. ರಾಯಚೂರು ಯುನಿವರ್ಸಿಟಿ ಬಳಿ ಘಟನೆ ನಡೆದಿದೆ. 24 ವರ್ಷದ ಪ್ರಾಣೇಶ್ ಮೃತ ಬೈಕ್ ಸವಾರ.
ಜಾಹೀರಾತು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ