ಬೆಂಗಳೂರು: ನಿನ್ನೆಯಷ್ಟೇ ನಾಡಗೀತೆ (Karnataka Anthem) ಹಾಡುವ ಕುರಿತಂತೆ ವಿವಾದ ಕಾಂಗ್ರೆಸ್ ಸರ್ಕಾರಕ್ಕೆ (Congress Govt) ಮುಜುಗರವನ್ನು ಉಂಟು ಮಾಡಿತ್ತು. ಇದರ ಬೆನ್ನಲ್ಲೇ ಮತ್ತೊಂದು ವಿವಾದ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಸರ್ಕಾರಕ್ಕೆ ಎದುರಾಗಿದೆ. ಫೆಬ್ರವರಿ 26ರಿಂದ ಮಾರ್ಚ್ 2ರ ವರೆಗೂ ನಡೆಯುವ ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆಗೆ (SSLC Preparatory Exam) ವಿದ್ಯಾರ್ಥಿಗಳೇ ಉತ್ತರ ಪತ್ರಿಕೆಗಳನ್ನು ತೆಗೆದುಕೊಂಡ ಬರಲು ಶಿಕ್ಷಣ ಇಲಾಖೆ ಸೂಚನೆ ನೀಡಿದ್ದು, ಇಲಾಖೆ ನಡೆಯ ವಿರುದ್ಧ ವಿಪಕ್ಷಗಳು ಕಿಡಿಕಾರಿವೆ. ವಿಪಕ್ಷ ನಾಯಕ ಆರ್ ಅಶೋಕ್ (R Ashok), ಸರ್ಕಾರ ವಿರುದ್ಧ ಬೆಂಕಿ ಉಗುಳಿದ್ದು, ಉತ್ತರ ಪತ್ರಿಕಗಳನ್ನು ಸರಬರಾಜು ಮಾಡಲಾಗದಷ್ಟು ಕಾಂಗ್ರೆಸ್ ಸರ್ಕಾರ ಬರಗೆಟ್ಟು ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾಹೀರಾತು
ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಪೂರ್ವಸಿದ್ಧತಾ ಪರೀಕ್ಷೆಗೆ ಉತ್ತರ ಪತ್ರಿಕೆಗಳನ್ನೂ ಕೂಡ ಸರಬರಾಜು ಮಾಡಲಾಗದಷ್ಟು ಬರಗೆಟ್ಟು ಹೋಗಿದೆ ಈ ದರಿದ್ರ ಕಾಂಗ್ರೆಸ್ ಸರ್ಕಾರ. ಉತ್ತರ ಪತ್ರಿಕೆಗಳನ್ನ ಕೊಡಲಾಗದ ಮೇಲೆ ವಿದ್ಯಾರ್ಥಿಗಳಿಂದ 50 ರೂಪಾಯಿ ಪರೀಕ್ಷಾ ಶುಲ್ಕವನ್ನ ವಸೂಲಿ ಮಾಡಿದ್ದು ಯಾವ ಪುರುಷಾರ್ಥಕ್ಕಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಆರ್ ಅಶೋಕ್ ಪ್ರಶ್ನಿಸಿದ್ದಾರೆ.
ಅಲ್ಲದೇ, ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ ಶಿಕ್ಷಣ ಸಚಿವರಿಗೆ ಇಲಾಖೆ ನಡೆಸಲು ಕೈಲಾಗದಿದ್ದರೆ, ಅವರಿಂದ ರಾಜೀನಾಮೆ ಪಡೆದುಕೊಂಡು ಯಾರಾದರೂ ಸಮರ್ಥರಿಗೆ ಶಿಕ್ಷಣ ಇಲಾಖೆ ನೀಡಿ. ಅದು ಬಿಟ್ಟು ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡಬೇಡಿ ಎಂದು ವಿಪಕ್ಷ ನಾಯಕರ ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಫ್ಯಾಶನ್ ವೀಕ್ ವತಿಯಿಂದ ಫ್ಯಾಶನ್ ಶೋ!
ಇನ್ನು ಪೂರ್ವಸಿದ್ಧತಾ ಪರೀಕ್ಷೆ ಕುರಿತಂತೆ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ವಾಟ್ಸಾಪ್ ಮೂಲಕ ಸಂದೇಶವನ್ನು ಕಳುಹಿಸಿದ್ದು, ಇದರಲ್ಲಿ ಇಲಾಖೆಯಿಂದ ಕೇವಲ ಪ್ರಶ್ನೆ ಪತ್ರಿಕಗಳನ್ನಷ್ಟೇ ಪೂರೈಸಲಾಗುವುದು, ಉತ್ತರ ಪತ್ರಿಕೆಗಳನ್ನು ಶಾಲೆಗಳಿಂದಲೇ ಒದಗಿಸಬೇಕು ಎಂದು ಸಂದೇಶ ಕಳುಹಿಸಲಾಗಿದೆ. ಆದರೆ ಶಾಲಾ ಶಿಕ್ಷಕರಿಗೆ ಈ ಹಣ ಎಲ್ಲಿಂದ ಒದಗಿಸಲಾಗುತ್ತದೆ ಎಂಬ ಸ್ಪಷ್ಟ ಇಲ್ಲದೇ ಇರೋ ಕಾರಣ ಆ ಹೊರೆಯನ್ನು ಮಕ್ಕಳ ಪೋಷಕರ ಮೇಲೆ ಹಾಕಲಾಗುತ್ತದೆ ಎನ್ನಲಾಗಿದೆ. ಆದರೆ ಪರೀಕ್ಷೆ ನಡೆಸಲು ಇದೇ ಮೊದಲ ಬಾರಿಗೆ ಶಿಕ್ಷಣ ಇಲಾಖೆ 50 ರೂಪಾಯಿ ಶುಲ್ಕವನ್ನು ವಸೂಲಿ ಮಾಡಿತ್ತು. ಆದರೂ ಉತ್ತರ ಪತ್ರಿಕೆ ನೀಡಲಾಗುತ್ತಿಲ್ಲ ಎಂದರೇ ಅರ್ಥವೇನು ಎಂದು ವಿಪಕ್ಷಗಳು ಪ್ರಶ್ನೆ ಮಾಡಿವೆ.
ಜಾಹೀರಾತು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ